ABOUT US :

ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬಯಸುವ ಹೊಸಬರಿಗೆ ಚನಲಚಿತ್ರ ಹಾಗೂ ಧಾರಾವಾಹಿಗಳ ಬಗ್ಗೆ ಸಂಪೂರ್ಣ ತಾಂತ್ರಿಕ ತರಬೇತಿಯ ಜೊತೆಗೆ ಚಿತ್ರರಂಗದ ಮಾಹಿತಿಯನ್ನು ನೀಡಿ, ಚಲನಚಿತ್ರ ಮತ್ತು ಚಲನಚಿತ್ರ ಉತ್ಸಾಹಿಗಳಿಗೆ ಒಂದು ಉತ್ತಮ ಸೇತುವೆಯಾಗಲು ಸೃಷ್ಟಿಯಾದ ಸಂಸ್ಥೆಯೇ ''ನಕ್ಷತ್ರ''.
2015 ರಲ್ಲಿ ಸ್ಥಾಪನೆಯಾದ  ನಕ್ಷತ್ರ ಸಂಸ್ಥೆ ಇದುವರೆಗೂ ಸಾಕಷ್ಟು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಚಿತ್ರರಂಗಕ್ಕೆ ಪರಿಚಯಿಸುತ್ತಾ ಬಂದಿದೆ. ಹಾಗೇ ಸಮಾಜ ಸುಧಾರಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ. ಚಿತ್ರರಂಗದ ಗಣ್ಯರಿಂದಲೇ ಅಭಿನಯ ಮತ್ತು ನಿರ್ದೇಶನದ ತಾಂತ್ರಿಕ ತರಬೇತಿಯನ್ನು ನೀಡಲಾಗುವುದು. ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ-ಛಾಯಾಗ್ರಹಣ-ನಿರ್ದೇಶನ-ಸಂಕಲನ-ನಿರೂಪಣೆ-ವಸ್ತ್ರವಿನ್ಯಾಸ-ಫೋಟೋಶೂಟ್-ನೃತ್ಯ-ಬಜೆಟ್ ತಯಾರಿ-ಸಂಪೂರ್ಣ ಸಿನಿಮಾ ಮಾಹಿತಿಯನ್ನು ನೀಡಲಾಗುವುದು. ಸಂಸ್ಥೆಗೆ ಸೇರುವ ಪ್ರತಿಯೊಬ್ಬ ನಿರ್ದೆಶನ ವಿದ್ಯಾರ್ಥಿಯು ಒಂದೊಂದು ಕಿರುಚಿತ್ರವನ್ನು ನಿರ್ದೇಶಿಸಬೇಕು. ಹಾಗೆಯೇ ಅಭಿನಯ ತರಗತಿಯ ವಿದ್ಯಾರ್ಥಿಗಳು ಕನಿಷ್ಟ ಎರಡು ಕಿರುಚಿತ್ರದಲ್ಲಾದರೂ ಅಭಿನಯಿಸಲೇಬೇಕು.
ವಿದ್ಯಾರ್ಥಿಗಳಿಗೆ ಸಂಸ್ಥೆಯ ಗುರುತಿನ ಚೀಟಿ, ಸಮವಸ್ತ್ರ.ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುವುದು.
ಹಾಗೂ ಪ್ರತಿನಿತ್ಯ  ಸಿನಿಮಾ ಹಾಗೂ ಧಾರಾವಾಹಿಗಳ ಆಡಿಷನ್ ನಡೆಯುವ ಸ್ಥಳದ ಮಾಹಿತಿ ಮತ್ತು ದೂರವಾಣಿ ಸಂಖ್ಯೆಯನ್ನು ನೀಡಲಾಗುವುದು.
ತರಬೇತಿಯ ಅವಧಿ; 1 ತಿಂಗಳು ಮತ್ತು 4 ತಿಂಗಳು. ಬೆಳಿಗ್ಗೆ,ಸಂಜೆ ಹಾಗೂ ಭಾನುವಾರದ ತರಗತಿಗಳು.

ನಕ್ಷತ್ರ ಫಿಲ್ಮ್ ಇನ್ಸ್ಟಿಟ್ಯೂಟ್ (ರಿ) ಕೋರ್ಸುಗಳು:
  • ಅಭಿನಯ
  • ನಿರ್ದೇಶನ
  • ಸಂಕಲನ
  • ಛಾಯಾಗ್ರಹಣ
  • ನಿರೂಪಣೆ
  • ನೃತ್ಯ

No comments:

Post a Comment